ಕನ್ನಡ ಜಾನಪದ ನಿಘಂಟು (ಪದ ಸಂಸ್ಕೃತಿ ಕೋಶ) ಸಂಪುಟ

Ad Placement

ಕುಲಪತಿಗಳ ನುಡಿ

ಜಾನಪದದ ಅಧ್ಯಯನದಲ್ಲಿ ಕರ್ನಾಟಕದ ವಿದ್ವಾಂಸರು ಮಾಡಿರುವ ಸಾಧನೆ ಅನನ್ಯವಾದದ್ದು. ಕಳೆದ ಸುಮಾರು ಒಂದೂವರೆ ಶತಮಾನದಲ್ಲಿ ಈ ಅಧ್ಯಯನ ಬಹುಮುಖಿಯಾಗಿ ಸಾಗಿದೆ. ಮೊದಮೊದಲು ಜಾನಪದದ ಸಂಗ್ರಹಕಾರ್ಯ, ಅದರಲ್ಲೂ ಗೀತ ಜಾನಪದದ ಸಂಗ್ರಹಕಾರ್ಯ ಹೆಚ್ಚಿನ ಆದ್ಯತೆಯನ್ನು ಪಡೆದದ್ದು ಸಹಜವೇ. ಆಮೇಲಾಮೇಲೆ, ಕರ್ನಾಟಕದ ವಿಶ್ವವಿದ್ಯಾಲಯಗಳು ಜಾನಪದವನ್ನು ಅಧ್ಯಯನದ ವಿಷಯವನ್ನಾಗಿ ಪರಿಗಣನೆ ಮಾಡಿದ ಮೇಲೆ, ಭಾಷಿಕ ಜಾನಪದದ ಜೊತೆಗೆ ವಸ್ತು ಜಾನಪದ, ಆಚರಣ ಜಾನಪದ ಮೊದಲಾದುವೂ ಸಂಗ್ರಹಯೋಗ್ಯವೆನಿಸಿ ತಮ್ಮ ಸಾಂಸ್ಕೃತಿಕ ಮಹತ್ವವನ್ನು ದಾಖಲುಗೊಳಿಸಿಕೊಂಡುದು ಕನ್ನಡ ಜಾನಪದ ಅಧ್ಯಯನದ ಚರಿತ್ರೆಯಲ್ಲಿ ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಸಂಗತಿ. ಅನಿವಾರ್ಯವೂ ಅತ್ಯಗತ್ಯವೂ ಆಗಿದ್ದ ಈ ಬೆಳವಣಿಗೆಯಿಂದಾಗಿ ಕರ್ನಾಟಕ ವಾಚಿಕ ಪರಂಪರೆಯ ಸಾಂಸ್ಕೃತಿಕ ವಿಶಿಷ್ಟತೆಗಳನ್ನು ಬೃಹತ್‌ ಪ್ರಮಾಣದಲ್ಲಿ ದಾಖಲು ಮಾಡಿದ ಹೆಗ್ಗಳಿಕೆ ಸಾಧ್ಯವಾಯಿತು. ಇದಕ್ಕೆ ಬಹಳ ಮುಖ್ಯವಾದ ಕಾರಣ ನಮ್ಮ ಜಾನಪದ ಸಂಗ್ರಹಕಾರರ ಮತ್ತು ವಿದ್ವಾಂಸರ ಅವಿರತ ದುಡಿಮೆ. ಫ್ಲೀಟ್‌, ಕಿಟ್ಟೆಲ್‌ ಮೊದಲಾದ ಪಾಶ್ಚಾತ್ಯ ವಿದ್ವಾಂಸರಿಂದ ಆರಂಭವಾದ ಈ ಕಾರ್ಯ ಇಪ್ಪತ್ತನೇ ಶತಮಾನದ ನಡುಮಧ್ಯಾಹ್ನದ ಹೊತ್ತಿಗೆ ದೇಶೀಯ ಸಂಗ್ರಹಕಾರರನ್ನೂ ಒಳಗೊಂಡು ಬತ್ತದ ತೊರೆಯಾಗಿ ಹರಿಯಿತು. ಆನಂತರದಲ್ಲಿ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಸಂಗ್ರಹ, ವಿಶ್ಲೇಷಣೆ ಮತ್ತು ಬೋಧನೆಯಲ್ಲಿ ತೊಡಗಿಕೊಂಡು ಸಂಗ್ರಹ ಕಾರ್ಯಕ್ಕೂ ವಿಶ್ಲೇಷಣಾ ಕಾರ್ಯಕ್ಕೂ ಶಿಸ್ತುಬದ್ಧ ಅಧ್ಯಯನದ ಆಯಾಮಗಳನ್ನು ರೂಪಿಸಿದರು; ಜಾನಪದ ಅಧ್ಯಯನದ ನೆಲೆಗಳನ್ನು ಪಾಶ್ಚಾತ್ಯ ಮತ್ತು ದೇಶೀಯ ವಿಶಿಷ್ಟತೆಗಳ ಬೆಳಕಿನಲ್ಲಿ ಹೆಚ್ಚು ತಾರ್ಕಿಕ ಹಾಗೂ ತಾತ್ವಿಕ ವಿನ್ಯಾಸಕ್ಕೆ ಅಳವಡಿಸುವ ಕೆಲಸಗಳನ್ನು ಮಾಡಿದರು. ಕನ್ನಡ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಇಷ್ಟೆಲ್ಲಾ ಆಗುತ್ತಿರುವ ವೇಳೆಗೆ ನಮ್ಮ ವಿದ್ವಾಂಸರಲ್ಲಿ ಜಾನಪದ ವಿಶ್ವವಿದ್ಯಾನಿಲಯದ ಪರಿಕಲ್ಪನೆ ಮೂಡಿದ್ದು ಒಂದು ಅಭೂತಪೂರ್ವ ಸಂಗತಿಯೆಂದೇ ಹೇಳಬೇಕು.


ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ನಮ್ಮ ಹಿರಿಯರ ಅಪೇಕ್ಷೆಯ ಮತ್ತು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಫಲವಾಗಿ ಜನ್ಮ ತಳೆದು ಇನ್ನೂ ಐದಾರು ವರ್ಷಗಳಷ್ಟೇ ಆಗಿವೆ. ಭಾರತದ ಮಾತ್ರವಲ್ಲ, ವಿಶ್ವದ ಪ್ರಪ್ರಥಮ ಜಾನಪದ ವಿಶ್ವವಿದ್ಯಾಲಯ ಎಂಬ ಪ್ರಾಮುಖ್ಯತೆಯನ್ನು ಸ್ಥಾಪಿಸಿಕೊಂಡಿರುವ ನಮ್ಮ ಈ ವಿಶ್ವವಿದ್ಯಾಲಯ ತನ್ನ ಕ್ರಿಯಾಶೀಲತೆಯ ಅಲ್ಪಾವಧಿಯಲ್ಲಿಯೇ ತುಂಬಾ ಮಹತ್ವದ ಕಾರ್ಯಗಳನ್ನು ಮಾಡಿದೆ ಮತ್ತು ಮಾಡುತ್ತಾ ಸಾಗಿದೆ. ಜಾನಪದದ ಮೂಲ ನೆಲೆಗಳು ನಮ್ಮ ಹಳ್ಳಿಗಳು; ಗೊಟಗೋಡಿ ಅಂತಹ ಹಳ್ಳಿಗಳಲ್ಲಿ ಒಂದು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಈ ಹಳ್ಳಿಯನ್ನೇ ತನ್ನ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಸ್ಥಾಪಿತವಾದದ್ದು ನಿಜಕ್ಕೂ ಅರ್ಥಪೂರ್ಣ. ಆದರೆ ಹಳ್ಳಿಯೊಂದನ್ನು ನೆಲೆಯಾಗಿಸಿಕೊಂಡು ಒಂದು ವಿಶ್ವವಿದ್ಯಾಲಯ ನಾಡಿನಾದ್ಯಂತ ತನ್ನ ಕಾರ್ಯಬಾಹುಗಳನ್ನು ಚಾಚುವುದಾಗಲಿ, ತಾನು ಮಾಡಿದ ಕೆಲಸಗಳನ್ನು ಜನತೆಗೆ ತಲುಪಿಸುವುದಾಗಲಿ ಸುಲಭಸಾಧ್ಯವಾದದ್ದಲ್ಲ. ನಮ್ಮ ವಿಶ್ವವಿದ್ಯಾನಿಲಯ ಇಂತಹ ಸವಾಲಿನ ಪರಿಸ್ಥಿತಿಯನ್ನು ಬಹು ಸಮರ್ಥವಾಗಿ ನಿಭಾಯಿಸುತ್ತಾ ಬ೦ದಿರುವುದು ನಿಜಕ್ಕೂ ಸಾಹಸಯಾತ್ರೆಯೇ ಸರಿ.


ಕರ್ನಾಟಕ ಸಾಂಸ್ಕೃತಿಕ ವಲಯಕ್ಕೆ ಜಾನಪದ ವಿಶ್ವವಿದ್ಯಾಲಯದ ಸ್ಪಷ್ಟ ಪರಿಕಲ್ಪನೆ ಹೇಗೆ ಒಂದು ಅಭೂತಪೂರ್ವ ಸಂಗತಿಯೋ ಹಾಗೆಯೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ “ಕನ್ನಡ ಜಾನಪದ ನಿಘಂಟುಪದಸಂಸ್ಕೃತಿ ಕೋಶ'ದ ಪರಿಕಲ್ಪನೆ ಒಂದು ಅಭೂತಪೂರ್ವ ಸ೦ಗತಿ. ವಿಶ್ವವಿದ್ಯಾಲಯ ಸ್ಥಾಪನೆಗೊಂಡ ಆರಂಭಿಕ ದಿವಸಗಳಲ್ಲಿಯೇ ಇಂತಹ ಸವಾಲಿನ ಕೆಲಸಕ್ಕೆ ಕೈಯಿಕ್ಕಿದುದು ಇನ್ನೂ ಮಹತ್ವದ ಸಂಗತಿ. ನಾಡಿನಾದ್ಯಂತ ಆಯಾ ಜಿಲ್ಲೆಗಳೊಳಗಿನ ಸಾಂಸ್ಕೃತಿಕ ವಲಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು "ಕ್ಷೇತ್ರತಜ್ಞ'ರನ್ನು ನಿಯೋಜಿಸಿ ಜನಸಂಸ್ಕೃತಿಯ ನೆಲಮೂಲ ಸ್ಥಿತಿಗಳಿಗೂ ಸ್ಥಿತ್ಯಂತರ ಗತಿಗಳಿಗೂ ಸಾಕ್ಷ ಮಾಗಿ ನಿಲ್ಲುವ ಪದಗಳನ್ನೂ ಅವುಗಳ ಸಾಂಸ್ಕೃತಿಕ ಅರ್ಥವಿವರಗಳನ್ನೂ ಸಂಗ್ರಹಿಸುವುದು, ಸಂಗ್ರಹಿಸಿದ ಸಾಮಗ್ರಿಯನ್ನು ಅಧ್ಯಯನ ಎಧಾನಕ್ಕೆ ಒಳಪಡಿಸಿ ಹೆಚ್ಚಿನ ನಿಖರತೆ ಅಧಿಕೃತತೆ ನಿಷ್ಕೃಷ್ಟತೆಗಳನ್ನು ಪ್ರಾಪ್ತವಾಗಿಸುವುದು, ಹೀಗೆ ಸಿದ್ಧಗೊಂಡ ಸಾಮಗ್ರಿಯನ್ನು ಪದಸಂಸ್ಕೃತಿಕೋಶದ ಪರಿಕಲ್ಪನಾತ್ಮಕ ಚೌಕಟ್ಟಿಗೆ ಎರಕ ಹೊಯ್ಯುತ್ತಿರುವುದು "ಕನ್ನಡ ಜಾನಪದ ನಿಘಂಟು' ರಚನಾ ಕಾರ್ಯದ ತ್ರಿವಿಧ ಸೋಪಾನಗಳಾಗಿವೆ. ಈ ಸ್ಪಷ್ಟ ಕಾರ್ಯಸೂಚಿಗಳನ್ಹಯ ರಚನೆಯಾದ ನಿಘಂಟುವಿನ ಮೊದಲನೆಯ ಮತ್ತು ಎರಡನೆಯ ಸಂಪುಟಗಳು ಈಗಾಗಲೇ ಪ್ರಕಟವಾಗಿದ್ದು, ಇದೀಗ ಮೂರನೆಯ ಸಂಪುಟ ಸಂಸ್ಕೃತಿ ಅಧ್ಯಯನದಲ್ಲಿ ಆಸಕ್ತರಾದವರ ಕೈಸೇರುತ್ತಿದೆ.


ನವ ಜಾಗತೀಕರಣ ಬಿತ್ತಿ ಬೆಳೆಯುತ್ತಿರುವ, ಆರ್ಥಿಕ ಉದಾರ ನೀತಿಯ ಪೋಷಾಕು ತೊಟ್ಟ, ವಿಶ್ವಮಾರುಕಟ್ಟೆಯ ವಾಣಿಜ್ಯ ಜಾಲ ಪುರಾಕೃತ ಸಾಂಸ್ಕೃತಿಕ ಚಹರೆಗಳನ್ನು ತನ್ನ ಜನಜೀವನದ ಒಡಲೊಳಗೆ ಕಾಪಿಟ್ಟುಕೊಂಡ ಭಾರತದಂತಹ 'ಅಭಿವೃದ್ಧಿಶೀಲ” ದೇಶಗಳನ್ನೂ ಸರಕುಸಂಸ್ಕೃತಿಯ ಪೂರ್ವಯೋಜಿತ ವರ್ತುಲದೊಳಕ್ಕೆ ಸಿಕ್ಕಿಸುತ್ತಿದೆ. ಇದರ ಪರಿಣಾಮವಾಗಿ ನಮ್ಮ ಹಳ್ಳಿಗಳೂ ತಮ್ಮ ಮೂಲ ಸಂಸ್ಕೃತಿಯ ದೇಸೀತನವನ್ನು ಕಳೆದುಕೊಳ್ಳುತ್ತಿವೆ ಅಥವಾ ಆ ದೇಸೀತನ ಸ್ಥಿತ್ಯಂತರಗೊಳ್ಳುತ್ತಿದೆ. ಆರ್ಥಿಕ ಪ್ರಾಬಲ್ಯವುಳ್ಳ ದೇಶಗಳು ತಮ್ಮ ಪ್ರಭಾವಶೀಲತೆಯನ್ನು ವ್ಯಾಪಿಸುವುದಕ್ಕಾಗಿ ಸೃಷ್ಟಿಸಿದ ಈ ಬಿಕ್ಕಟ್ಟಿಗೆ ಪ್ರತಿರೋಧಕ ಶಕ್ತಿಯನ್ನು ದೇಶೀ ಸಂಸ್ಕೃತಿಯ ವೈಲಕ್ಷಣ್ಯಗಳಲ್ಲಿಯೇ ಅನ್ವೇಷಿಸುವ ಕೆಲಸವನ್ನು ದೇಶೀ ಸಂಸ್ಕೃತಿತಜ್ಞರು ಮಾಡುತ್ತಿದ್ದಾರೆ. ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ಇದೊಂದು ಬಹು ಮಹತ್ವದ ಸಂಕೀರ್ಣ ಸ್ಥಿತಿ. ಇಂತಹ ಸ್ಥಿತಿಯಲ್ಲಿ ನಾಡಿನ ಹಿರಿಯ ಸಂಸ್ಕೃತಿ ಚಿಂತಕರಾದ ಡಾ.ರಾಗೌ ಅವರ ನಿರ್ದೇಶನ ಮತ್ತು ನೇತೃತ್ವದ ಸಂಪಾದಕ ಮಂಡಳಿಯ ನೆರವಿನೊಡನೆ ನಮ್ಮ ವಿಶ್ವವಿದ್ಯಾಲಯ ಮಾಡುತ್ತಿರುವ 'ಪದಸಂಸ್ಕೃತಿ ಕೋಶ'ದ ಕೆಲಸಕ್ಕೆ ಜಗತ್ತಿನಲ್ಲಿ ಒಂದು ವಿಶಿಷ್ಟ ಸ್ಥಾನ ಇದೆ ಎಂದು ನಾವು ತಿಳಿದಿದ್ದೇವೆ.


ಕನ್ನಡ ಜಾನಪದಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಿಕೊಂಡು ನಮ್ಮ ವಿಶ್ವವಿದ್ಯಾಲಯ ಕಾರ್ಯಪ್ರವೃತ್ತವಾಗಿದೆ. ಆರಂಭಿಕ ಹಂತದಲ್ಲಿರುವ ಯಾವುದೇ ವಿಶ್ವವಿದ್ಯಾನಿಲಯ ತನ್ನ ಭೌತಿಕ ಮತ್ತು ಬೌದ್ಧಿಕ ಆವಶ್ಯಕತೆಗಳನ್ನು ಒಟ್ಟೊಟ್ಟಿಗೇ ಪೂರೈಸಿಕೊಂಡು ಮುನ್ನಡೆಯಬೇಕಾದದ್ದು ಅನಿವಾರ್ಯ, ನಮ್ಮ ವಿಶ್ವವಿದ್ಯಾಲಯದ ಕಾರ್ಯಕ್ಷಮತೆ ಈ ಅಗತ್ಯ ಪೂರೈಕೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಸರ್ಕಾರದಿಂದಲೂ, ಸರ್ಕಾರಿ ಹಾಗೂ ಸರ್ಕಾರೇತರ ಅಂಗಸಂಸ್ಥೆಗಳಿಂದಲೂ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡು ತಾನು ಹಮ್ಮಿಕೊಂಡ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜಾನಪದ ವಿಶ್ವವಿದ್ಯಾನಿಲಯ ದಾಖಲೆಯ ಪ್ರಗತಿ ಸಾಧಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.


“ಕನ್ನಡ ಜಾನಪದ ನಿಘಂಟು' ಯೋಜನೆ ನಮ್ಮ ವಿಶ್ವವಿದ್ಯಾನಿಲಯದ ಮಹತ್ವಾಕಾಂಕ್ಷೆಯ ಯೋಜನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ನೆರವಿನೊಡನೆ ವಿಶ್ವವಿದ್ಯಾನಿಲಯ ರೂಪಿಸಿದ ಈ ಯೋಜನೆ ಸುಮಾರು ನಾಲ್ಕು ವರ್ಷಗಳಿಂದ ಕಾರ್ಯಪ್ರವೃತ್ತವಾಗಿದೆ. ಅದಕ್ಕೊಂದು ಸೈದ್ಧಾಂತಿಕ ಸ್ವರೂಪ ಡಾ.ರಾಗೌ ಅವರಿಂದ ಪ್ರಾಪ್ತವಾಯಿತು. ಅರ್ಹ ವಿದ್ವಾಂಸರು, ಅಗತ್ಯ ಸಿಬ್ಬಂದಿ ಹಾಗೂ ಸೌಕರ್ಯಗಳೊಡನೆ ಸಂಪಾದಕ ಮಂಡಳಿ ಕೆಲಸ ಮಾಡತೊಡಗಿದ್ದು ಯೋಜನೆಗೆ ಒಂದು ಆಶಾದಾಯಕ ಸಂಗತಿಯಾಗಿಯೇ ಪರಿಣಮಿಸಿತು. ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣರಾದವರು ಕನ್ನಡದ ಹಿರಿಯ ವಿದ್ವಾಂಸರೂ, ಸಂಸ್ಕೃತಿ ಚಿ೦ತಕರೂ, ಕವಿಗಳೂ ಆದ ಡಾ.ರಾಮೇಗೌಡ(ರಾಗೌ) ಅವರು. ಈ ನಿಘಂಟು ಯೋಜನೆಗೆ ಅವರು ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು “ಕನ್ನಡ ಜಾನಪದ ನಿಘಂಟಿ'ನ ಸಾಂಸ್ಕೃತಿಕ ಮತ್ತು ಭಾಷಿಕ ನೆಲೆಗಳನ್ನು ದೃಢಪಡಿಸಿ ಮೂರು ಸಂಪುಟಗಳನ್ನು ಸಿದ್ಧಪಡಿಸಿದ್ದು ಕನ್ನಡದ ಸಂಸ್ಕೃತಿ ಅಧ್ಯಯನದ ಇತಿಹಾಸದಲ್ಲಿ ಒಂದು ಅಪೂರ್ವ ಘ ಕನ್ನಡ ಅಭಿವ್ಯ ದ್ಧಿ ಪ್ರಾ ಪ್ರಾಧಿಕಾರದ ಅಧ್ಯಕ್ಷರ ನುಡಿ


ಭಾಷಾ ವಿಜ್ಞಾನಿಗಳ ಪ್ರಕಾರ ಜಗತ್ತಿನಲ್ಲಿ ಆರುಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಇವುಗಳಲ್ಲಿ ಕೆಲವು ಭಾಷೆಗಳಿಗೆ ಲಿಪಿಗಳಿವೆ. ಹಲವು ಭಾಷೆಗಳಿಗೆ ಲಿಪಿಗಳಿಲ್ಲ. ಲಿಪಿ ಇರಲಿ ಇಲ್ಲದಿರಲಿ ಜನರ ಬಾಯಲ್ಲಿ ಈಗಲೂ ಬಳಕೆಯಲ್ಲಿರುವ ಭಾಷೆಗಳನ್ನು ಜೀವಂತ ಭಾಷೆಗಳೆಂದು ಕರೆಯುತ್ತಾರೆ. ನಮ್ಮ ಕರ್ನಾಟಕದಲ್ಲಿಯೇ ಈ ಎರಡೂ ಬಗೆಯ ಭಾಷೆಗಳಿವೆ. ಲಿಪಿ ಇಲ್ಲದೆ ಬರೀ ಜನರ ಬಾಯಲ್ಲಿ ಬಳಕೆಯಲ್ಲಿರುವ ಭಾಷೆಗಳೆಂದರೆ ಕೊಡವ, ತುಳು, ಕೊಂಕಣಿ. ಹಾಗೆಯೇ ಜನರ ಬಾಯಲ್ಲಿ ಬಳಕೆಯಲ್ಲಿರುವ ಲಿಪಿ ಇರುವ ಭಾಷೆ ಕನ್ನಡ. ಇದು ಕರ್ನಾಟಕದ ರಾಜ್ಯಭಾಷೆ. ಭಾಷೆಗಳಲ್ಲಿ ಇನ್ನೊಂದು ಬಗೆಯ ಭಾಷೆಗಳಿವೆ. ಒಂದು ಕಾಲದಲ್ಲಿ ಜನರು ಆಡುತ್ತಿದ್ದ ಬಾಷೆಯಾಗಿದ್ದು ಲಿಪಿಯನ್ನೂ ಒಳಗೊಂಡಿದ್ದು ಕಾಲಾಂತರದಲ್ಲಿ ಲಿಪಿರೂಪದಲ್ಲಿ ಮಾತ್ರ ಉಳಿದು ಜನರ ಬಾಯಲ್ಲಿ ಉಳಿಯದೆ ಹೋದದ್ದು; ಇದನ್ನು ಮೃತಭಾಷೆ ಎಂದು ಕರೆಯುತ್ತಾರೆ. ಇದಕ್ಕೆ ಸಂಸ್ಕೃತ ಉತ್ತಮ ಉದಾಹರಣೆ. ಲಿಪಿರೂಪದಲ್ಲಿ ಮಾತ್ರ ಉಳಿದಿರುವ ಭಾಷೆಯೊಂದು ಸಮೃದ್ಧವಾಗಿ ಹಲವು ಬಗೆಯ ಜ್ಞಾನವಿಜಾರ ಸಾಹಿತ್ಯಸಂಪತ್ತನ್ನು ಒಳಗೊಂಡಿದ್ದರೆ ಅ೦ತಹ ಭಾಷೆಯನ್ನು ಶಾಸ್ತ್ರೀಯ ತ ಎಂದು ಕರೆಯುತ್ತಾರೆ. ಈ ಶಾಸ್ತ್ರೀಯ ಮೃತಭಾಷೆಯನ್ನು ಅಧ್ಯಯನ ಮಾಡಬಹುದು; ಅದರ ಜ್ಞಾನವಿಜಾರ ಸಾಹಿತ್ಯಸಂಗತಿಗಳನ್ನು ಸಮಕಾಲೀನ ವಿವೇಕಕ್ಕೆ ಮುಖಾಮುಖಿಯಾಗಿಸಿ ಚರ್ಚಿಸಬಹುದು. ಆದರೆ ಈಗಾಗಲೇ ಜನರ ಬಾಯಿಂದ ಕಳೆದುಹೋಗಿರುವ ಈ ಭಾಷೆಯನ್ನು ಮತ್ತೆ ಜೀವಂತ ಭಾಷೆಯಾಗಿಸುವುದು ಸಾಧ್ಯವಿಲ್ಲ


ಕನ್ನಡ ಒಂದು ಜೀವಂತ ಭಾಷೆ. ಯಾವುದೇ ಭಾಷೆಯು ತನ್ನ ನೆರೆಹೊರೆಯ ಭಾಷೆಗಳ ಸಂಪರ್ಕಕ್ಕೆ ಒಳಗಾಗುತ್ತಲೆ ಅದರ ಪ್ರಭಾವ ಪ್ರೇರಣೆಗಳಿಗೆ ಭಾಗಿಯಾಗುತ್ತದೆ. ಹೀಗಾದಾಗ ಕೊಡುವ ಪಡೆಯುವ ಪ್ರಕ್ರಿಯೆ ಸಾಮಾನ್ಯವಾಗಿ ಎರಡೂ ಭಾಷೆಗಳ ಮಧ್ಯೆ ನಡೆಯುತ್ತದೆ. ವ್ಯಾಕರಣ ವಿಚಾರವನ್ನು ಬಿಟ್ಟಂತೆ ಪದಕೋಶಗಳ ವಿಷಯದಲ್ಲಿ ಈ ಕೊಡು-ಪಡೆಯ ವ್ಯವಹಾರ ಭಾಷೆಗಳ ಜಾಯಮಾನಕ್ಕೆ ಎರವಿಲ್ಲದಂತೆ ನಡೆಯುತ್ತದೆ. ಈ ವಿಚಾರದಲ್ಲಿ ಯಾವುದೇ ಭಾಷೆಯೂ ಮಡಿವಂತಿಕೆಯನ್ನು ಹಾಕಿಕೊಳ್ಳುವಂತಿಲ್ಲ. ಮಡಿವಂತಿಕೆ ಎಂಬುದು ಭಾಷೆಯ ಸಾವಿಗೆ ಆಹ್ವಾನವಿದ್ದಂತೆ. ಒಂದು ಭಾಷೆ ಎಷ್ಟು ಅನ್ಯಭಾಷಾ ಗಡಿಗಳ ಸಂಪರ್ಕಕ್ಕೆ ಬಂದಂತೆ ಭಾಷೆಗಳ ಪ್ರಭಾವಕ್ಕೆ ಒಳಗಾಗುತ್ತದೋ ಅದಕ್ಕೆ ಅನುಗುಣವಾಗಿ ಭಾಷಾ ಪ್ರಭೇದಗಳು ಬೆಳೆಯುತ್ತವೆ. ಅಂದರೆ ಭಾಷಾ ಪ್ರಯೋಗದಲ್ಲಿ ಸಂಪರ್ಕಭಾಷೆಯ ಪ್ರಭಾವದಿಂದಾಗಿ ವ್ಯತ್ಯಯಗಳು ಉಂಟಾಗುತ್ತವೆ. ಕೋಲಾರ ಭಾಗದ ಕನ್ನಡವು ತೆಲುಗಿನ ಪ್ರಭಾವಕ್ಕೆ ಒಳಗಾಗಿ ಕನ್ನಡ ಉಚ್ಚಾರಣೆಗಿ೦ತ ಭಿನ್ನದನಿಯಾಗಿ ಕೇಳಿಬರುತ್ತದೆ. ಹಾಗೆಯೇ ಮರಾಠಿ ತಮಿಳು ಗಡಿಗಳ ಭಾಷಾ ಪ್ರಭಾವಕ್ಕೆ ಒಳಗಾದ ಕನ್ನಡ ಪ್ರಯೋಗದಲ್ಲಿ ವ್ಯತ್ಯಾಸಗಳು ಒಡೆದು ಕಾಣಿಸುವಂತೆ ಕೇಳಿಬರುತ್ತವೆ. ಇನ್ನು ಒಳನಾಡಿನಲ್ಲಿನ ಕನ್ನಡ ಭಿನ್ನತೆಗಳು ಜಾತಿ ವರ್ಗ ಪ್ರದೇಶ ವಿಸ್ತಾರಗಳಿಗೆ ಹೊಂದಿಕೊಂಡಂತೆ ವ್ಯತ್ಯಾಸಗಳಿಗೆ ಒಳಗಾಗಿವೆ. ಈ ಕಾರಣದಿಂದಲೇ ಕನ್ನಡ ಒಂದು ಭಾಷೆಯಾದರೂ ಅದು ಒಂದೇ ರೀತಿಯ ಉಚ್ಚಾರಣೆಯ ಕನ್ನ! ಡವಲ್ಲ.


ಇದನ್ನು ಮನಗಂಡೇ ಕನ್ನಡದ ಕವಿರಾಜಮಾರ್ಗಕಾರ “ಕನ್ನಡ೦ಗಳ್‌ ಒಳವು' ಎಂದು ಹೇಳಿದ್ದಾನೆ. ಆದಿ ದ್ರಾವಿಡ ಮೂಲಕ್ಕೆ ಸೇರಿದ ಕನ್ನಡ ಭಾಷೆಗಳಲ್ಲಿ ಮೂಲದ್ರಾವಿಡ ಭಾಷೆಯ ಎಷ್ಟು ಪದಗಳು ಉಳಿದಿವೆ? ಹುಡುಕುತ್ತಾ ಹೋದರೆ ವಿಸ್ಮಯವಾಗುವಷ್ಟು ಕಡಿಮೆ ಪ್ರಮಾಣದಲ್ಲಿ ಅವು ಉಳಿದಿವೆ. ಕಾಲಾಂತರದಲ್ಲಿ ಪ್ರಾಕೃತ ಸಂಸ್ಕೃತ ಪಾಳಿ ಭಾಷೆಗಳ ಪಭಾವಕ್ಕೆ ಒಳಗಾದ ಕನ್ನಡ ತನ್ನೊಳಕ್ಕೆ ಹೇರಳವಾಗಿ ಆ ಎಲ್ಲ ಭಾಷೆಗಳ ಪದಗಳನ್ನು ಪರಿಭಾಷೆಗಳನ್ನು ಸ್ವೀಕರಿಸಿದೆ. ಈ ಪ್ರಭಾವದ ಚಹರೆಗಳನ್ನು ಲಿಪಿರೂಪದಲ್ಲಿ ದಾಖಲಾಗಿರುವ ಕನ್ನಡದ ಚಾರಿತ್ರಿಕ ಅಧ್ಯಯನದಿಂದ ತಿಳಿಯಬಹುದು.


ದೇಶವು ಅನ್ಯಾಕ್ರಮಣಕ್ಕೆ ಒಳಗಾದಂತೆ ದೇಶಭಾಷೆಗಳು ಅನ್ಯಭಾಷೆಗಳ ಸಂಪರ್ಕಕ್ಕೆ ಒಳಗಾದದ್ದು ಒಂದು ದೊಡ್ಡ ಚರಿತ್ರೆ ಕನ್ನಡ ಭಾಷೆಯ ಮೇಲೆ ಪರ್ಷಿಯ, ಫ್ರೆಂಚ್‌, ಅರೇಬಿಯಾ, ಇಂಗ್ಲಿಷ್‌ ಇತ್ಯಾದಿ ಎದೇಶಿ ಭಾಷೆಗಳ ಪ್ರಭಾವ ಗಾಢವಾಗಿ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಭಾಷಿಕ ಮೂಲದ ಜನ ಇಲ್ಲಿ ಆಡಳಿತ ನಡೆಸುವಾಗ ಅವರ ನೆಲದ ಆಡಳಿತ ವ್ಯವಸ್ಥೆಯ ಎಲ್ಲ ಮಾದರಿಗಳನ್ನೂ ಇಲ್ಲಿ ಅನುಷ್ಠಾನಗೊಳಿಸಿದರು. ಶಿಕ್ಷಣ ಆಡಳಿತ ಹಾಗೂ ಸಾಮಾಜಿಕ ಕ್ಷೇತ್ರಗಳ ಮೇಲಾದ ಇವರ ಆಡಳಿತದ ಪರಿಣಾಮಗಳು ತೀವ್ರಗತಿಯ ಬದಲಾವಣೆಗಳಿಗೂ ಕಾರಣವಾದವು. ಹೀಗಾಗಿ ಆ ವ್ಯವಸ್ಥೆ ಸಂಬಂಧಿಸಿದ ಅವರ ಭಾಷೆಯ ಪರಿಭಾಷಾ ಪದಗಳು ಕನ್ನಡ ಭಾಷೆಯ ಪದಕೋಶಗಳಿಗೆ ಸಹಜವಾಗಿಯೇ ಸೇರಿಹೋದವು. ಹೀಗೆ ಅನ್ಯಭಾಷೆಯ ಪದಗಳನ್ನು ತನ್ನೊಳಕ್ಕೆ ತೆಗೆದುಕೊಳ್ಳುವಾಗ ಸ್ವೀಕರಿಸುವ ಭಾಷೆಯು ತನ್ನ ಭಾಷಿಕ ಜಾಯಮಾನದ ಮೂಲಸ್ದರೂಪಕ್ಕೆ ಅವುಗಳನ್ನು ಒಗ್ಗಿಸಿಕೊಂಡು ಸ್ವೀಕರಿಸುತ್ತದೆ. ಇದು ಆ ಭಾಷೆಯ ಅನನ್ಯತೆ. ಇದನ್ನು ಕನ್ನಡ ಎ೦ದೂ ಬಿಟ್ಟುಕೊಟ್ಟಿಲ್ಲ. ಯಾವುದೇ ಜೀವಂತ ಭಾಷೆಯು ಸ್ವಕೀಯ ಪ್ರಜ್ಞೆಯನ್ನು ಕಾಯ್ದುಕೊಳ್ಳುತ್ತಲೇ ಪರಭಾಷಾ ಪ್ರಭಾವಗಳನ್ನು ಅರಗಿಸಿಕೊಳ್ಳುತ್ತದೆ. ಆ ಪ್ರಭಾವಗಳು ಕ: ಭಾಷೆಯ ಒಡಲಲ್ಲಿ ಅರಗಿದ ಅನ್ನದಂತೆ ಭಾಷೆಯ ಬೆಳವಣಿಗೆಗೆ ಧಾತು ದ್ರವ್ಯಗಳಾಗುತ್ತವೆ. ಹೀಗಾಗಿ ಇಂದು ಕನ್ನಡ ಆಧುನಿಕ ಜಗತ್ತಿನಲ್ಲಿ ಎದುರಾಗುವ ಎಲ್ಲ ಬಗೆಯ ಪ್ರಭಾವ ಪ್ರೇರಣೆಗಳಿಗೆ ಮುಖಾಮುಖಿಯಾಗುತ್ತಾ ಅವುಗಳು ಕೊಡುತ್ತಿರುವ ಹೊಸ ಬಗೆಯ ಪದಗಳನ್ನು ಪರಿಭಾಷೆಗಳನ್ನು ಸ್ವೀಕರಿಸುತ್ತಾ ಬೆಳೆದಿದೆ, ಬೆಳೆಯುತ್ತಿದೆ. ಇದು ಈ ಭಾಷೆಯ ವಿಕಸನ ಗುಣದ ಬಹುದೊಡ್ಡ ಶಕ್ತಿ. ಇದಲ್ಲದೆ ಆಧುನಿಕ ವಿಜ್ಞಾನ ಜಗತ್ತಿನ ಗಣಕ ತಂತ್ರಾಂಶದ ಎಲ್ಲ ಬಗೆಯ ವಿದ್ಯುನ್ಮಾನಗಳಿಗೂ ತೆರೆದುಕೊ೦ಡು ಬಳಕೆಯಾಗುತ್ತಿರುವ ಭಾಷೆಯಾಗಿದೆ. ಇದು ಕನ್ನಡ ಭಾಷೆಗಿರುವ ಒಳಗೊಳ್ಳುವ ಗುಣ, ಶಕ್ತಿ.


ಇಂಥ ಕನ್ನಡ ಭಾಷೆಗೆ ಇನ್ನೊ೦ದು ಬಗೆಯ ನೆಲಮೂಲ ಸೊಗಡಿನ ಶಕ್ತಿವಿಶೇಷತೆ ಇದೆ. ಇದು ಕನ್ನಡ ಪರಂಪರೆಯ ಮೌಖಿಕ ರೂಪದ ಕಾಲುದಾರಿ ಪರಂಪರೆಗಳಿಗೆ ಸಂಬಂಧಿಸಿದ ವಿಶೇಷ ಗುಣ. ಲಿಪರೂಪದ ಚರಿತ್ರೆಯಲ್ಲಿ ಕನ್ನಡ ಭಾಷಿಕ ಜಗತ್ತು ಇಡೀ ಜಾಗತಿಕ ಮಟ್ಟದಲ್ಲಿ ಗುರುತಿಸಿ ಗೌರಎಸಬೇಕಾದ ಪ್ರತಿಭಾ ವಿಲಾಸವನ್ನು ಮೆರೆದಿದೆ. ಇದನ್ನು ಪಂಪ ಕನ್ನಡದ "ವಾಗ್‌ವಿಳಾಸ' ಎಂದು ಕರೆದಿದ್ದಾನೆ. ಅದೇ ರೀತಿ ಲಿಪಿಯಿಲ್ಲದ ಕನ್ನಡ ಮೌಖಕ ಪರಂಪರೆಯಲ್ಲೂ ಬಹುದೊಡ್ಡ ವಾಗ್ಯಿಳಾಸವನ್ನು ಕಾಣಬಹುದು. ಕವಿರಾಜಮಾರ್ಗಕಾರನ "ಕನ್ನಡಂಗಳ್‌ ಒಳವು' ಎನ್ನುವ ಮಾತಿನಲ್ಲಿ ಕನ್ನಡಭಾಷೆಯ ಬಹುತ್ವಗಳ ಗುರುತಿಸುವಿಕೆ ಇದೆ. ಈ ಬಹುತ್ವ ಎನ್ನುವುದು ಕೇವಲ ಪದಗಳ ಪರಿಭಾಷೆಗಳ ನುಡಿ-ನುಡಿಕಟ್ಟುಗಳ ಪ್ರಯೋಗದಲ್ಲಿ ಕಾಣುವುದಿಲ್ಲ. ಅದು ಇಡೀ ಕನ್ನಡ ಸಮುದಾಯಗಳ ಬದುಕಿನ ಒಡಲೊಳಗಿನ ಶಕ್ತಿವಿಶಿಷ್ಟತೆಗೆ ಸಂಬಂಧಿಸಿದ್ದು, ಇಡೀ ಕರ್ನಾಟಕವನ್ನು ವ್ಯವಸಾಯದ ಆಧಾರದಲ್ಲಿಯೇ ಪ್ರಧಾನವಾಗಿ ನಾಲ್ಕು ನೆಲೆಗಳಲ್ಲಿ ಪ್ರತ್ಯೇಕಿಸಿ ಗುರುತಿಸಬಹುದು: 1 ಮಲೆನಾಡು 2)ಅರೆಮಲೆನಾಡು 3)ಬಯಲುಸೀಮೆ 4)ಬೆಂಗಾಡು ಸೀಮೆ. ಈ ವಿಭಾಗಕ್ರಮ ಭೂ ವೈಲಕ್ಷಣ್ಯ ಮತ್ತು ಹವಾಮಾನದ ವಿಶೇಷತೆಯನ್ನು ಆಧರಿಸಿದಂತೆ ರೂಪುಗೊಂಡ ಕೃಷಿ ಸಂಸ್ಕೃತಿಯನ್ನು ಗಮನಿಸಿ ವಿಂಗಡಿಸಿದ್ದು, ಆದರೆ ಈ ವಿಂಗಡಣೆಯೂ ಗೆರೆಕೊರೆದ ಲೆಕ್ಕಾಚಾರದಲ್ಲಿ ಹಾಕಿದ ಸರಳ ರೇಖೆಯ ವಿಂಗಡಣೆಯಲ್ಲ. ಒಂದೊಂದು ವಿಂಗಡಣೆಯ ಒಳಗೂ ಗಮನಿಸಿದರೆ ಹಲವು ಬಹುತ್ವಗಳನ್ನು ಗುರುತಿಸಬಹುದು. ಇವು ವರ್ಣ-ವರ್ಗ ಜಾತಿ-ಕುಲ ಇತ್ಯಾದಿ ಕಾರಣಮೂಲಗಳಲ್ಲಿ ಪ್ರತ್ಯೇಕಗೊಂಡಂತೆ ಬೆಳೆದವು.

ಇಷ್ಟಾಗಿಯೂ ಯಾವುದೋ ಒಂದು ಬಗೆಯ ಅಘೋಷಿತ ಒಪ್ಪಂದ ವಿಧಿಯಲ್ಲಿ ಹೊಂದಾಣಿಕೆಯ ಬಾಳ್ವೆ ಕಟ್ಟಿಕೊಂಡವು. ಇಂಥ ಹೊಂದಾಣಿಕೆಯೆಂಬುದು ನಂಬಿಕೆಯಾಗಿ, ನಂಬಿಕೆ ನಡಾವಳಿಯಾಗಿ, ನಡಾವಳಿ ಸಂಪ್ರದಾಯವಾಗಿ, ಸಂಪ್ರದಾಯ ಕೊನೆಗೆ ಪರಂಪರೆಯ ಧಾರೆಯಾಗಿ ಇವರ ಬದುಕಿನಲ್ಲಿ ಶೋಷಣೆ ಕ್ರೌರ್ಯಗಳ ಸ್ವಾರ್ಥಮುಖೀ ಅಜ್ಞಾನವೂ ಅನುರಣಿಸಿದೆ. ಪರಸ್ಪರ ಕೊಳು-ಕೊಡೆಗಳಿರುವಂತೆ ಒಳಗು-ಹೊರಗುಗಳ ವಿಧಿನಿಷೇಧಗಳೂ ಇವೆ. ಇವುಗಳ ನಡುವೆ ಸೂಕ್ಷ್ಮ ಸಂಘರ್ಷದ ಮುಖಾಮುಖಯೂ ತಣ್ಣಗಿನ ವಿದ್ಯಮಾನವಾಗಿ ತಳಸ್ತರದಲ್ಲಿ ಹರಿದಿದೆ. ಇವೆಲ್ಲವನ್ನೂ ಆ ವ್ಯಾಪ್ತಿಯೊಳಗಿನ ಸಾಕ್ಷೀಪ್ರಜ್ಯೆಯ ಪ್ರಮಾಣು ರೂಪದಲ್ಲಿ ಜನರ ಭಾಷೆ ತನ್ಮೊಳಕ್ಕೆ ತಂದುಕೊಂಡಿದೆ. ಹೀಗಾಗಿ ಭಾಷೆ ಎಂದರೆ ಕೇವಲ ಸಂವಹನ ಮಾಧ್ಯಮ ಸಂಕೇತವಲ್ಲ, ಅದೊಂದು ಸಂಸ್ಕೃತಿ, ಅದೊಂದು ಪರಂಪರೆ, ಅದೊಂದು ಜನಸಮುದಾಯ ಪ್ರಜ್ಞೆ ಮೇಲೆ ಗುರುತಿಸಿದ ನಾಲ್ಕು ವಲಯಗಳ ಕೃಷಿ ಸಂಸ್ಕೃತಿಗಳನ್ನೇ ಗಮನಿಸಿದರೆ ಅವುಗಳಲ್ಲಿ ಹರಿದಿರುವ ನೆಲಮೂಲ ಜ್ಞಾನ ಪರಂಪರೆಗಳು ಅವುಗಳ ಅಸ್ಮಿತೆಯ ಅನನ್ಯತೆಗಳಿಗೆ ಕನ್ನಡಿ ಹಿಡಿದಂತಿದೆ.


ಕನ್ನಡದ ಮೌಖಿಕ ಪರಂಪರೆಯಲ್ಲಿರುವ ಅನುಭವ ಜ್ಞಾನವೆಂಬುದು ನೆಲನಿಷ್ಠೆಯಲ್ಲಿ ಬೇರುಬಿಟ್ಟು ಬೆಳೆದದ್ದು. ಹಾಗೆಯೇ ಕಾಯಕ ಮೂಲದಲ್ಲಿ ಅರಳಿದ್ದು. ಕುಲಚರಿತೆಗಳ ಸಾಂಸ್ಕೃತಿಕ ಧಾರ್ಮಿಕ ಆವರಣದಲ್ಲಿ ಆಚರಣೆಯ ಸ್ಪರ್ಶ ಪಡೆದದ್ದು. ಸಾಂಸ್ಕೃತಿಕ ದ್ರವ್ಯಮೂಲವನ್ನು ಚರಿತ್ರೆಯಾಗಿಸದೆ ಪರಂಪರೆಯ ಧಾರೆಯಾಗಿಸಿ ಪುರಾಣಗಳ ರೂಪಕಾಕೃತಿಯಲ್ಲಿ ಕಾವ್ಯವಾಗಿಸಿ ಕಥನವಾಗಿಸಿ ಆಚರಣೆಯಾಗಿಸಿ ವರ್ತಮಾನದಲ್ಲಿ ನಿರುತವಾಗಿರುವುದು. ಇದು ಮೌಖಿಕ ಪರಂಪರೆಯ ಸ್ವರೂಪ. ಈ ಸಂಪತ್ತಿನ ಮುಖ್ಯವಾಹಕ ಶಕ್ತಿಸಾಧನ ಭಾಷೆ. ಹೀಗೆ ಭಾಷೆ ಎಂಬುದು ಜನಾ೦ಗವೊಂದರ ಸಾಂಸ್ಕೃತಿಕ ಜೀವಧಾರೆಯನ್ನು ಧಾರಣಮಾಡಿಕೊಂಡಿರುತ್ತದೆ. ನುಡಿಗಟ್ಟುಗಳಲ್ಲಿ ಸಂಧಾಭಾಷೆಯ ಪರಿಭಾಷೆಗಳಲ್ಲಿ ಈ ಜೀವಧಾರೆ ಎಂಬುದು ಉಸಿರಾಡುತ್ತಿರುತ್ತದೆ. ಇಂಥ ನುಡಿಗಳ ಪರಿಭಾಷೆಗಳ ಅನುಭವದ್ರವ್ಯವನ್ನೂ ಬೇರೊಂದು ಭಾಷೆಗೆ ಅನುವಾದಿಸಲಾಗದು. ಅವುಗಳ ಅರ್ಥವ್ಯಂಜಕ ಗುಣ ವಾಚ್ಯದ ನೆಲೆಯದಲ್ಲ; ಅದನ್ನು ಮೀರಿದಂತೆ ರೂಪಕದ ಪ್ರತಿಮಾತ್ಮಕ ಸಂಕೇತದ ಪರಿವ್ಯಾಪ್ತಿಯಲ್ಲಿ ವಿಸ್ತರಿಸಿದ್ದು. ಇವು ಆ ಭಾಷೆಯನ್ನಾಡುವ ಜನಸಂಸ್ಕೃತಿಯ ಪ್ರಾಣಧಾರೆಗಳು. ಒಂದೇ ಭಾಷೆಯಲ್ಲಿ ಭಾಷಾ ಬಳಕೆಯ ಪ್ರಾದೇಶಿಕ ವಿಸ್ತಾರಕ್ಕೆ ಅನುಗುಣವಾಗಿ ನುಡಿಗಟ್ಟುಗಳ ಪ್ರಯೋಗಗಳು ವೈವಿಧ್ಯಮಯವೂ ಅನನ್ಯಗುಣದವೂ ಆಗಿ ಬಳಕೆಯಲ್ಲಿರುತ್ತವೆ. ಕನ್ನಡ ಭಾಷೆಯಲ್ಲಿ ಭಾಷಿಕ ಬಹುತ್ಹಗಳ ಅಗತ್ಯತೆಯನ್ನು ಅದರ ನುಡಿಗಟ್ಟುಗಳ ಪ್ರಯೋಗಗಳಲ್ಲೂ ಗುರುತಿಸಬಹುದು. ಸಾಂಸ್ಕೃತಿಕ ಸಂವೇದನೆಯ ಅನನ್ಯತೆಯನ್ನೂ ಈ ವಾಚಿಕ ರೂಪಗಳು ಧಾರಣ ಮಾಡಿಕೊಂಡಿರುತ್ತವೆ. ಸಹಜವಾಗಿ ಆಧುನಿಕ ವಿದ್ಯಮಾನಕ್ಕೆ ಬದುಕು ತೆರೆದುಕೊಂಡಂತೆ ಈ ಪರಂಪರೆಯ ಜ್ಞಾನ ಮರೆಯಾಗುತ್ತದೆ. ಪ್ರಯೋಗಾವಸ್ಥೆಯ ಆವರಣದ ಸ್ಪರ್ಶ ಕಳೆಯುವ ಮುನ್ನ ಅರ್ಥವಿವರಣೆಯ ಜೊತೆಗೆ ಸಂದರ್ಭಸ್ಪರ್ಶದ ಸೊಗಡಿನ ವಿವರಣೆಯನ್ನೂ ಒಳಗೊಂಡಂತೆ ದಾಖಲಿಸಬೇಕಾದ ಅಗತ್ಯ ಈ ಕಾಲದ ತುರ್ತಾಗಿದೆ. ಇದು ಇಂದಿನ ವಿದ್ಯಾವಂತರ ಆದ್ಯ ಕರ್ತವ್ಯವೂ ಆಗಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಜಾನಪದ ವಿಶ್ವವಿದ್ಯಾಲಯ ಕೇವಲ ಪಳೆಯುಳಿಕೆಯ ದಾಖಲೀಕರಣದಲ್ಲಿ ನಿರುತವಾಗುವ ಸಂಸ್ಥೆಯಲ್ಲ. ಪರಂಪರೆಯ ಅಧ್ಯಯನ ಮಾಡುತ್ತಲೇ ಜೀವಸತ್ವವನ್ನು ಆಧುನಿಕ ಬದುಕಿನ ಜೊತೆಗೆ ಸಂಗತವಾಗಿಸುವ, ಪರಂಪರೆಯನ್ನು ವರ್ತಮಾನವಾಗಿಸುವ ಸಂಸ್ಥೆಯಾಗಬೇಕಿದೆ. ಅದಕ್ಕಾಗಿ ಅದು ಹಲವು ಪ್ರಗತಿಪರ ಯೋಜನೆಗಳನ್ನು ಹಾಕಿಕೊಂಡಿದೆ. ಜಾನಪದ ನಿಘಂಟು ಯೋಜನೆ ಜಾನಪದ ಎ.ವಿ.ಯ ಮಹತ್ವದ ಯೋಜನೆ. ಈ ಕಾರ್ಯ ಅಲ್ಪಾವಧಿಯಲ್ಲಿ ಆಗಿ ಮುಗಿಯುವುದಲ್ಲ; ಸಂಘಟನಾತ್ಮಕ ಕಾರ್ಯಯೋಜನೆಯಾಗಿ ದೀರ್ಫಕಾಲದ ಶ್ರಮ ಮತ್ತು ಬದ್ಧತೆಯಿಂದ ಮಾಡುತ್ತಾ ಬಂದಿದೆ. ಈಗಾಗಲೇ ಎರಡು ಸಂಪುಟಗಳನ್ನು ಪ್ರಕಟಿಸಿರುವ ಈ ಕಾರ್ಯಯೋಜನೆಯು ಮೂರನೆಯ ಸಂಪುಟವನ್ನೂ ಪ್ರಕಟಿಸತೊಡಗಿದೆ. ಈ ಯೋಜನೆಗೆ | ಆರ್ಥಿಕ ಸಹಾಯ ನೀಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದೆ. ಕನ್ನಡ ಭಾಷೆಯ | ಜಾನಪದ ಜಗತ್ತಿನ ಈ ಅರಿವಿನ ಭಂಡಾರವನ್ನು ದಾಖಲೀಕರಿಸುತ್ತಿರುವ ವಿವಿಗೆ, ಅದರಲ್ಲಿ ತೊಡಗಿಸಿಕೊಂಡಿರುವ | ಸಮಸ್ತ ವಿದ್ವಾಂಸರಿಗೆ, ಸಂಪಾದಕ ಮಂಡಳಿಗೆ, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ನವರಿಗೆ ಕನ್ನಡ ಅಭಿವೃ ದ್ಧಿ ಪ್ರಾಧಿಕಾರದ ವಂದನೆಗಳು.



Ad Placement